ಪೋಸ್ಟ್‌ಗಳು

5ಇ ಬೋಧನಾ ಪದ್ಧತಿಯ ಬಗ್ಗೆ ಮಾಹಿತಿಗಾಗಿ ಈ ಕೆಳಗಡೆಯ ಲಿಂಕ್ ಅನ್ನು ಕ್ಲಿಕ್ಕಿಸಿ      https://drive.google.com/open?id=1PywW bCKeq3Xee9zj9iWXpsE3ZWEMRUV2
For 8, 9 class ( ಅಭ್ಯ್ಯಾಸ  ಪುಸ್ತಕ   ಕನ್ನಡ  ) work book kannada first language click here  https://drive.google.com/open?id=1qEskuiT9pDu_rRaWpQgRqswJcxva2_Dl 
CSAS EXAM  INFORMATIOM  CLICK  Here https://drive.google.com/open?id=1RZABZYUER5dyibtZ6wbl1zO-0Nu8c5yd

ಪತ್ರ ಲೇಖನ :ಪ್ರಬಂಧ ಲೇಖನ :ಗಾದೆ ಮಾತಿನ ವಿಸ್ತರಣೆ

ಪತ್ರ ಲೇಖನ : ಆತ್ಮೀಯರು, ಬಂಧುಗಳು, ಸಂಬಂಧಿಕರು, ಗೆಳೆಯರು,ಸಂಘ ಸಂಸ್ಥೆಗಳು ,ಸರ್ಕಾರಿ ಕಛೇರಿಗಳು ಸಂಪರ್ಕವನ್ನು ಇಟ್ಟುಕೊಳ್ಳಲು ಬಳಸುವ ಒಂದು ಮಾದ್ಯಮ ಪತ್ರ ಲೇಖನ. ಮಕ್ಕಳಲ್ಲಿ ಸ್ವಯಂ ಅಭಿವ್ಯಕ್ತಿ ಸಾಧನವೂ ಇದಾಗಿದೆ. ಮೊಬೈಲ್ ಯುಗದಲ್ಲಿ ಪತ್ರ ವ್ಯವಹಾರವು ಕಡಿಮೆಯಾದರೂ ನಿಂತಿಲ್ಲ . ಪತ್ರ ಲೇಖನದಲ್ಲಿ ಗಮನಿಸಬೇಕಾದ ಅಂಶಗಳು  : ·           ಪತ್ರವು ಸುಸ್ಪಷ್ಟ ಹಾಗೂ ಅಚ್ಚುಕಟ್ಟಾಗಿರಬೇಕು . ·           ಪತ್ರದ ಬಲಭಾಗದಲ್ಲಿ ಪತ್ರ ಬರೆಯುವವರ ಹೆಸರು, ಸ್ಥಳ, ದಿನಾಂಕ  ಇರಬೇಕು. ·           ಕಛೇರಿ ಪತ್ರದಲ್ಲಿ ಯಾರಿಗೆ ಪತ್ರ ಬರೆಯಲಾಗಿದೆಯೋ ಅವರ ವಿಳಾಸ ವನ್ನು ಪತ್ರದ ಎಡಭಾಗದಲ್ಲಿ ಬರೆಯಬೇಕು ·           ಪತ್ರದಲ್ಲಿ ಸಂಭೋಧನೆಯು ಬಹಳ ಮುಖ್ಯವಾಗಿದ್ದು ಇಡೀ ಪತ್ರದ ಮುಖ್ಯ ಅಂಶವಾಗಿದೆ. ತಂದೆಗೆ ತೀರ್ಥರೂಪರಿಗೆ ಎಂತಲೂ, ತಾಯಿಗೆ ಪತ್ರ ಬರೆಯುವಾಗ ಮಾತೃಶ್ರೀ ಯವರಿಗೆ ಎಂತಲೂ, ಗೆಳೆಯರಿಗೆ ಪತ್ರ ಬರೆಯುವಾಗ ಪ್ರೀತಿಯ ಗೆಳೆಯನಿಗೆ ಎಂತಲೂ , ಕಛೇರಿಗೆ ಬರೆಯುವಾಗ ಮಾನ್ಯರೇ ಎಂತಲೂ ಪ್ರಯೋಗಿಸಬೇಕು. ·             ಪತ್ರದಲ್ಲಿ   ವಿಷಯವು   ಮುಖ್ಯವಾಗಿದ್ದು  ,  ಪತ್ರವು   ಏನನ್ನು   ಹೇಳಬಯಸುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಬೇಕು. ಈಗಾಗಲೇ ಪತ್ರ ವ್ಯವಹಾರ ನಡೆದಿದ್ದಲ್ಲಿ ಹಿಂದಿನ ಪತ್ರದ ಉಲ್ಲೇಖವನ್ನು ನಮೂದಿಸಬೇಕು. ·           ವಿಷಯ ವಿವರಣೆಯಲ್ಲಿ  ವಿಷಯವನ್ನು ಪೂರ್ಣವಾಗಿ ತಿಳಿಸಬೇಕು.

ಭಾಷಾ ಕೌಶಲಗಳು

ಭಾಷಾ ಕೌಶಲಗಳು ವ್ಯಕ್ತಿಯು ತನ್ನ ಅನುಭವ , ಅನಿಸಿಕೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಇರುವ ಮಾಧ್ಯಮವೇ ಭಾಷೆ. ಭಾಷೆಯಲ್ಲಿ ನಾಲ್ಕು ರೀತಿಯ ಕೌಶಲಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ_ 1)       ಆಲಿಸುವಿಕೆ 2)      ಮಾತುಗಾರಿಕೆ 3)      ಓದುವಿಕೆ 4)     ಬರವಣಿಗೆ ಈ ಭಾಷಾ ಕೌಶಲಗಳ ಸೂಕ್ತ ಅಭ್ಯಾಸ ಇಲ್ಲವಾದಲ್ಲಿ ಭಾಷೆಯಲ್ಲಿ ಸಾಮಥ್ಯ ಗಳಿಸಲು ಸಾಧ್ಯವಿಲ್ಲ . ಸೂಕ್ತ ತರಬೇತಿ , ಅಭ್ಯಾಸ ಹಾಗೂ ನಿರಂತರ ಪ್ರಯೋಗದಿಂದ ಮಾತ್ರ ಭಾಷಾ ಕೌಶಲಗಳು ಬೆಳೆಯುತ್ತವೆ . ಆಲಿಸುವಿಕೆ : ಧ್ವನಿಗಳನ್ನು ಅರ್ಥಮಾಡಿಕೊಂಡು ಗ್ರಹಿಸುವುದೇ ಆಲಿಸುವಿಕೆಯಾಗಿದೆ . ಕೇಳುವಿಕೆಯೆಲ್ಲ ಗ್ರಹಿಕೆ ಅಲ್ಲ . ಕೇಳಿದ ಶಬ್ಧಗಳನ್ನು ಅರ್ಥಗಳನ್ನಾಗಿ ವ್ಯಾಖ್ಯಾನಿಸಿ ಸ್ವೀಕರಿಸುವ ಒಂದು ಮಾನಸಿಕ ಕ್ರೀಯೆ . ಇಲ್ಲಿ ಏಕಾಗ್ರತೆ ಮುಖ್ಯ . ಧ್ವನಿಯ ಏರಿಳಿತಗಳನ್ನು ಸ್ಪಷ್ಟವಾಗಿ ಗುರುತಿಸಬೇಕು . ಮುಂದಿನ ಎಲ್ಲಾ ಭಾಷಾ ಕೌಶಲಗಳಿಗೆ ಆಧಾರ ಆಲಿಸುವಿಕೆ . ಮಗುವು ಸಹ ತನ್ನ ತಾಯಿಯಿಂದ ಪದಗಲನ್ನು ಆಲಿಸಿ ಕಲಿಯುತ್ತದೆ . ಆಲಿಸುವಿಕೆಯನ್ನು ಉತ್ತಮಪಡಿಸಲು ಕೈಗೊಳ್ಳಬಹುದಾದ ಕ್ರಮಗಳು : 1). ದೈಹಿಕ ಆರೋಗ್ಯವನ್ನು ಉತ್ತಮಪಡಿಸುವುದು. 2) . ಪ್ರಶಾಂತ ವಾತಾವರಣ ಹಾಗೂ ಆತ್ಮೀಯತೆಯ ವಾತಾವರಣವನ್ನು ನಿರ್ಮಿಸುವುದು. 3) ಶಬ್ಧಾರ್ಥ ಮತ್ತು ಭಾವಾರ್ಥಗಳನ್ನು ಗಮನಿಸುವಂತೆ ಆಲಿಸಬೇಕು

ಯಕ್ಷಗಾನ

ಇಮೇಜ್
ತೆಂಕು ತಿಟ್ಟು ಬಡಗುತಿಟ್ಟು

ಡಿ.ವಿ.ಜಿ. ಒಂದು ಪರಿಚಯ

ಇಮೇಜ್
ಡಿ.ವಿ.ಜಿ ಅವರು ೧೮೮೭ , ಮಾರ್ಚ್ ೧೭ ರಂದು ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ದೇವನಹಳ್ಳಿಯಲ್ಲಿ ಜನಿಸಿದರು. ಅವರ ಪೂರ್ವಿಕರು ತಮಿಳುನಾಡಿನ ತಿರುಚಿನಾಪಳ್ಳಿಯ ಕಡೆಯವರು. ಅವರ ಮುತ್ತಜ್ಜ ಕೋಲಾರ ಜಿಲ್ಲೆಯ ಮುಳಬಾಗಿಲಿಗೆ ವಲಸೆ ಬಂದವರು. ಶೇಕದಾರ ಕುಟುಂಬದ ಗುಂಡಪ್ಪನವರು ೧೮೯೮ ರಲ್ಲಿ ಕನ್ನಡ ಲೋಯರ್ ಸೆಕೆಂಡರಿ ಪರೀಕ್ಷೆಯಲ್ಲಿ ಪಾಸಾದರು. ಆ ಸಂದರ್ಭದಲ್ಲೇ ಸಿಕ್ಕ ಇಂಗ್ಲಿಷ್ ಶಿಕ್ಷಣವನ್ನು ಪಡೆದರು. ಖಾಸಗಿಯಾಗಿ ಸಂಸ್ಕೃತವನ್ನು ಅಭ್ಯಾಸ ಮಾಡಿದರು. ಮುಂದೆ ಸಂಬಂಧಿಕರೊಬ್ಬರ ಸಹಾಯದಿಂದ ಮೈಸೂರಿನ ಮಹಾರಾಜ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು. ಆದರೆ ೧೯೦೫ ರಲ್ಲಿ ಮೆಟ್ರಿಕ್ಯುಲೇಷನ್ ನಲ್ಲಿ ತೇರ್ಗಡೆಯಾಗಲಿಲ್ಲ. ಅಲ್ಲಿಗೆ ಶಾಲಾ ಶಿಕ್ಷಣವನ್ನು ನಿಲ್ಲಿಸಿದರು. ಪ್ರೌಢಶಾಲೆಯಲ್ಲಿ ಓದುವಾಗಲೇ ಗುಂಡಪ್ಪನವರಿಗೆ ಮದುವೆಯಾಯಿತು. ಹೆಂಡತಿ ಭಾಗೀರಥಮ್ಮ. ಮುಂದೆ ಮುಳಬಾಗಿಲಿನ ಒಂದು ಶಾಲೆಯಲ್ಲಿ ಬದಲಿ ಅಧ್ಯಾಪಕರಾಗಿ ಕೆಲ ಕಾಲ ಕೆಲಸ ಮಾಡಿದರು. ಅದೇ ಅವರ ವೃತ್ತಿ ಜೀವನದ ನಾಂದಿ. ಆದರೂ ಅಲ್ಲಿರಲಾಗಲಿಲ್ಲ. ವೃತ್ತಿ ಬಿಟ್ಟು ಮುಂದೆ ಕೋಲಾರದ ಚಿನ್ನದ ಗಣಿಯಲ್ಲಿ, ಸೋಡಾ ಫ್ಯಾಕ್ಟರಿಯಲ್ಲಿ, ಕೆಲಸ ಮಾಡಿದರು. ನಂತರ ಬೆಂಗಳೂರಿಗೆ ಬಂದು ಕೆಲಸಕ್ಕಾಗಿ ಎಲ್ಲೆಂದರಲ್ಲಿ ಅಲೆದರು. ಜೀವನ ನಿರ್ವಹಣೆಗಾಗಿ ಏನಾದರೂ ಮಾಡಬೇಕಿದ್ದ ಗುಂಡಪ್ಪನವರು "ಸೂರ್ಯೋದಯ ಪ್ರಕಾಶಿಕ" ಪತ್ರಿಕೆಯಲ್ಲಿ ಬಾತ್ಮೀದಾರರಾಗಿ ಸೇರಿಕೊಂಡರು. ಹೆಚ್ಚು ಕಾಲ ಈ ಪತ್