ಭಾಷಾ ಕೌಶಲಗಳು


ಭಾಷಾ ಕೌಶಲಗಳು
ವ್ಯಕ್ತಿಯು ತನ್ನ ಅನುಭವ , ಅನಿಸಿಕೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಇರುವ ಮಾಧ್ಯಮವೇ ಭಾಷೆ. ಭಾಷೆಯಲ್ಲಿ ನಾಲ್ಕು ರೀತಿಯ ಕೌಶಲಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ_
1)      ಆಲಿಸುವಿಕೆ
2)     ಮಾತುಗಾರಿಕೆ
3)     ಓದುವಿಕೆ
4)    ಬರವಣಿಗೆ
ಭಾಷಾ ಕೌಶಲಗಳ ಸೂಕ್ತ ಅಭ್ಯಾಸ ಇಲ್ಲವಾದಲ್ಲಿ ಭಾಷೆಯಲ್ಲಿ ಸಾಮಥ್ಯ ಗಳಿಸಲು ಸಾಧ್ಯವಿಲ್ಲ .ಸೂಕ್ತ ತರಬೇತಿ, ಅಭ್ಯಾಸ ಹಾಗೂ ನಿರಂತರ ಪ್ರಯೋಗದಿಂದ ಮಾತ್ರ ಭಾಷಾ ಕೌಶಲಗಳು ಬೆಳೆಯುತ್ತವೆ.
ಆಲಿಸುವಿಕೆ:
ಧ್ವನಿಗಳನ್ನು ಅರ್ಥಮಾಡಿಕೊಂಡು ಗ್ರಹಿಸುವುದೇ ಆಲಿಸುವಿಕೆಯಾಗಿದೆ. ಕೇಳುವಿಕೆಯೆಲ್ಲ ಗ್ರಹಿಕೆ ಅಲ್ಲ . ಕೇಳಿದ ಶಬ್ಧಗಳನ್ನು ಅರ್ಥಗಳನ್ನಾಗಿ ವ್ಯಾಖ್ಯಾನಿಸಿ ಸ್ವೀಕರಿಸುವ ಒಂದು ಮಾನಸಿಕ ಕ್ರೀಯೆ. ಇಲ್ಲಿ ಏಕಾಗ್ರತೆ ಮುಖ್ಯ. ಧ್ವನಿಯ ಏರಿಳಿತಗಳನ್ನು ಸ್ಪಷ್ಟವಾಗಿ ಗುರುತಿಸಬೇಕು. ಮುಂದಿನ ಎಲ್ಲಾ ಭಾಷಾ ಕೌಶಲಗಳಿಗೆ ಆಧಾರ ಆಲಿಸುವಿಕೆ.
ಮಗುವು ಸಹ ತನ್ನ ತಾಯಿಯಿಂದ ಪದಗಲನ್ನು ಆಲಿಸಿ ಕಲಿಯುತ್ತದೆ.
ಆಲಿಸುವಿಕೆಯನ್ನು ಉತ್ತಮಪಡಿಸಲು ಕೈಗೊಳ್ಳಬಹುದಾದ ಕ್ರಮಗಳು :
1). ದೈಹಿಕ ಆರೋಗ್ಯವನ್ನು ಉತ್ತಮಪಡಿಸುವುದು.
2) . ಪ್ರಶಾಂತ ವಾತಾವರಣ ಹಾಗೂ ಆತ್ಮೀಯತೆಯ ವಾತಾವರಣವನ್ನು ನಿರ್ಮಿಸುವುದು.
3) ಶಬ್ಧಾರ್ಥ ಮತ್ತು ಭಾವಾರ್ಥಗಳನ್ನು ಗಮನಿಸುವಂತೆ ಆಲಿಸಬೇಕು .
4). ಬೋಧಕನ ಬಗೆಗಿನ ಪೂರ್ವಾಗ್ರಹವನ್ನು ತೆಗೆದು ಹಾಕಬೇಕು .
5). ವಿಷಯ ಆಕರ್ಷಣೀಯವಾಗಿರುವಂತೆ ನಿರೂಪಿಸಬೇಕು.
6). ಧ್ವನಿಯ ಏರಿಳಿತ ಗಳನ್ನು ಬಳಸಬೇಕು.
7) ಕತೆ,ನಾಟಕ, ಸಂಗೀತ ಮೊದಲಾದವುಗಳನ್ನು ಬೋಧನೆಯಲ್ಲಿ ಬಳಸಿಕೊಳ್ಳಬೇಕು.
8). ಮಾನಸಿಕರಾಗಿ ಸಿದ್ಧರಾಗಿ ವಿಷಯವನ್ನು ಆಲಿಸಲು ವಿಷಯವನ್ನು ಸರಳೀಕರಿಸಿ ಹೇಳಬೇಕು.

ಮಾತುಗಾರಿಕೆ:
ಮಾತೇ ಮುತ್ತು: ಮಾತೇ ಮೃತ್ಯು ಎಂಬ ಗಾದೆಮಾತಿನಂತೆ ಮಾತು ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿಸುತ್ತದೆ. ಮಾತು ಬಲ್ಲವನಿಗೆ ಜಗಳವಿಲ್ಲ .ಮಾತು ನಿತ್ಯ ಜೀವನದ ಪ್ರಕ್ರೀಯೆ. ದೈನಿಕ ವ್ಯವಹಾರದಲ್ಲಿ ಮಾತು ಪ್ರಮುಖ ಪಾತ್ರ ವಹಿಸುತ್ತದೆ.
ಮಾತಿನಲ್ಲಿ ಉಚ್ಚಾರಣೆಯ ದೋಷಗಳು, ಭಾಷೆಗೆ ಸಂಬಂಧಪಟ್ಟ ದೋಷಗಳು, ಉಗ್ಗುವಿಕೆ,ತೊದಲುವಿಕೆ, ಶಾರೀರಿಕ ದೋಷಗಳು , ಧ್ವನ್ಯಂಗಗಳಿಗೆ ಸಂಬಂಧಿಸಿದ ದೋಷಗಳು ಕಂಡುಬರುತ್ತದೆ.
ಮಾತುಗಾರಿಕೆ ಉತ್ತಮ ಪಡಿಸಲು ಕೈಗೊಳ್ಳಬೇಕಾದ ಕ್ರಮಗಳು:
1)      ಬಾಯೋದಿನ ಅಭ್ಯಾಸಗಳನ್ನು ಮಾಡಿಸುವುದು.
2)      ಭಾಷಣ ಸ್ಪರ್ಧೆಗಳನ್ನು ಏರ್ಪಡಿಸುವುದು.
3)      ಕತೆ ಹೇಳಿಸುವುದು.
4)      ಆಶುಭಾಷಣ , ಚರ್ಚಾಸ್ಪರ್ಧೆಗಳನ್ನು ಏರ್ಪಡಿಸುವುದು.
5)      ಉಗ್ಗುವಿಕೆ,ತೊದಲುವಿಕೆಗೆ ವೈದ್ಯಕೀಯ ಸಲಹೆ ಹಾಗೂ ಚಿಕಿತ್ಸೆಯನ್ನು ಒದಗಿಸುವುದು.
6)      ಧ್ವನ್ಯಂಗಗಳ ದೋಷ ನಿವಾರಿಸುವುದು.
7)      ನಾಟಕ ಏಕಪಾತ್ರಾಭಿನಯವನ್ನು ಮಾಡಿಸುವುದು.
8)      ಕಂಠಪಾಠಕ್ಕಿರುವ ಪದ್ಯಗಳನ್ನು ಹೇಳಿಸುವುದು.
ಓದುವಿಕೆ :
ಓದುವಿಕೆ ಒಂದು ಮನೋವೈಜ್ಞಾನಿಕ ಕ್ರೀಯೆ.ಮುದ್ರಿತ ವಿಷಯದ ಭಾಷೆಯ  ಬಗ್ಗೆ ಜ್ಞಾನ ವಿಲ್ಲದಿದ್ದಾಗ ಓದು ಸಾಧ್ಯವಿಲ್ಲ.ಓದುಗಾರಿಕೆ ಆಲೋಚನಾ ಶಕ್ತಿಯನ್ನು ವಿಕಾಸಗೊಳಿಸುತ್ತದೆ. ಇದೊಂದು ಜ್ಞಾನಾರ್ಜನೆಯ ಸಾಧನವೂ ಕೂಡಾ. ಮನುಷ್ಯ ಜೀವಿ ಮಾತ್ರ ಓದುವಿಕೆಯ ಪುಸ್ತಕ ಲೋಕದಲ್ಲಿ ವಿಹರಿಸಬಲ್ಲ.  ಮಾತು ರೂಢಿಗತವಾದರೆ ಓದು ಅಭ್ಯಾಸಗತವಾದ್ದು. ಓದುವುದಕ್ಕೆ ಸಿದ್ಧತೆ, ಮನಸ್ಸನ ಏಕಾಗ್ರತೆ , ಕಣ್ಣಿನ ಚಲನೆ, ಅರ್ಥಗ್ರಹಿಕೆಗಳು ಅಗತ್ಯವಾಗಿರಬೇಕು. ಉತ್ತಮವಾಗಿ ಮಾತು ಕಲಿತ ನಂತರವೇ ಓದು ಕಲಿಸಬೇಕು. ಓದನ್ನು ಅಕ್ಷರ ಪದ್ಧತಿ, ಪದಪದ್ಧತಿ,ವಾಕ್ಯ ಪದ್ಧತಿ ಮೂಲಕ ಕಲಿಸಬಹುದಾಗಿದೆ.
ಓದುಗಾರಿಕೆಯನ್ನು ಉತ್ತಮ ಪಡಿಸಲು ಕ್ರಮಗಳು :
1).ಓದುವ ಪುಸ್ತಕದ ನಡುವೆ ಸರಿಯಾದ ಅಂತರ ಕಾಪಾಡಿಕೊಳ್ಳಬೇಕು.
2). ಓದುವಿಕೆಯಲ್ಲಿ ಏರಿಳಿತಗಳು ಕಂಡುಬರುವಂತೆ ಹೇಳಿಕೊಡಬೇಕು.
3).ಓದುವಿಕೆಯಲ್ಲಿ ಅಂಜಿಕೆ ದೂರ ಮಾಡಬೇಕು .
4). ದಿನ ಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ಓದಿಸಬೇಕು.
5). ಅಂತ್ಯಾಕ್ಷರಿಗಳನ್ನು ಶಾಲೆಗಳನ್ನು ಏರ್ಪಡಿಸಬೇಕು
6).ಗಟ್ಟಿವಾಚನ ಮತ್ತು ಮೌನ ವಾಚನಕ್ಕೆ ಅವಕಾಶ ಮಾಡಿಕೊಡಬೇಕು.
7) ಹೊಸ ಪದಗಳನ್ನು ಓದಿ ಅರ್ಥ ಹೇಳಲು ಅವಕಾಶ ಮಾಡಿಕೊಡಬೇಕು.
8). ಸಾಹಿತ್ಯ ಸಂಘಗಳಲ್ಲಿ ಪದ್ಯವಾಚನ ಏರ್ಪಡಿಸಬೇಕು.
9). ಓದುವಾಗ ಲೇಖಕರ ಭಾವನೆಯನ್ನು ಗ್ರಹಿಸಿ ಓದುವಂತೆ ಸೂಚಿಸಬೇಕು.
10) ಪುಸ್ತಕ ಸಂಸ್ಕೃತಿ ಬೆಳೆಸಬೇಕು.
ಬರವಣಿಗೆ :
ಭಾಷೆಗೆ ಶಾಶ್ವತ ಮೌಲಗಯ ಬಂದಿರುವುದೇ ಬರವಣಿಗೆಯಿಂದ .ಭಾಷೆಯ ಸಂಕೇತ ರೂಪವೇ ಬರವಣಿಗೆ. ಇದೊಂದು ಸಂಕೀರ್ಣ ಕೌಶಲವಾಗಿದೆ. ಉತ್ತಮ ಬರವಣಿಗೆ ಗೌರವವನ್ನು ತಂದುಕೊಡುತ್ತದೆ.
ಆಲಿಸಿರುವ , ಓದಿರುವ ಮಾತುಗಳನ್ನು ಲಿಖಿತ ರೂಪಕ್ಕೆ ಇಳಿಸುವುದೇ ಬರವಣಿಗೆ.
ಬರವಣಿಗೆಯನ್ನು ಉತ್ತಮಪಡಿಸುವ ಮಾರ್ಗಗಳು:
1).ಕಾಗುಣಿತದ ಬಗ್ಗೆ ಸ್ಪಷ್ಟ ಪರಿಚಯ ನೀಡುವುದು .
2) ಕಾಫಿ ಬರವಣಿಗೆಯನ್ನು ನಿತ್ಯ ಮಾಡಿಸುವುದು.
3) ವರ್ಣಮಾಲೆಯ  ಸ್ಪಷ್ಟ ಪರಿಚಯ ನೀಡುವುದು
4). ಲೇಖನ ಚಿಹ್ನೆಗಳ ಪರಿಚಯ ಮಾಡಿಸಿ ಅವುಗಳ ಸಮರ್ಪಕ ಬಳಕೆಯ ಬಗೆಗೆ ತಿಳಿಸುವುದು.
5) ಮೊದಲು ನೋಡಿ ಬರೆಯುವ ನಂತರ ಕೇಳಿ ಬರೆಯುವ ಪದ್ಧತಿಗಳನ್ನು ರೂಢಿಸುವುದು.
6) ಉಕ್ತಲೇಖನ ನೀಡುವುದು.
7). ಲೇಖನಿಯನ್ನು ಸರಿಯಾಗಿ ಹಿಡಿದು ಕೊಳ್ಳುವುದನ್ನು ಕಲಿಸುವುದು.
8). ಆಕರ್ಷಣೀಯವಾಗಿ ಬರೆದವರಿಗೆ ಬಹುಮಾನ ಘೋಷಣೆ ಮಾಡಿ ಪ್ರೇರೇಪಿಸುವುದು.
9). ಸಂಕ್ಷೇಪಿಸಿ ಬರೆಯುವುದು ಮತ್ತು ವಿಸ್ತರಿಸಿ ಬರೆಯುವ ಸ್ಪರ್ಧೆಗಳನ್ನು ಏರ್ಪಡಿಸುವುದು.
10) .ಪಾಠದ ಸಾರಾಂಶವನ್ನು ಬರೆಯಿಸುವುದು.
11).ಪತ್ರಲೇಖನ , ಗಾದೆಮಾತು ,ಪ್ರಬಂಧ ಗಳನ್ನು ಬರೆಯಿಸುವುದು.





ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಶ್ರೀಮತಿ ನೇಮಿಚಂದ್ರ ರ ಪರಿಚಯ

ಸು.ರಂ. ಎಕ್ಕುಂಡಿ ಕವಿ ಪರಿಚಯ