ಪೋಸ್ಟ್‌ಗಳು

2019 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ
5ಇ ಬೋಧನಾ ಪದ್ಧತಿಯ ಬಗ್ಗೆ ಮಾಹಿತಿಗಾಗಿ ಈ ಕೆಳಗಡೆಯ ಲಿಂಕ್ ಅನ್ನು ಕ್ಲಿಕ್ಕಿಸಿ      https://drive.google.com/open?id=1PywW bCKeq3Xee9zj9iWXpsE3ZWEMRUV2
For 8, 9 class ( ಅಭ್ಯ್ಯಾಸ  ಪುಸ್ತಕ   ಕನ್ನಡ  ) work book kannada first language click here  https://drive.google.com/open?id=1qEskuiT9pDu_rRaWpQgRqswJcxva2_Dl 
CSAS EXAM  INFORMATIOM  CLICK  Here https://drive.google.com/open?id=1RZABZYUER5dyibtZ6wbl1zO-0Nu8c5yd

ಪತ್ರ ಲೇಖನ :ಪ್ರಬಂಧ ಲೇಖನ :ಗಾದೆ ಮಾತಿನ ವಿಸ್ತರಣೆ

ಪತ್ರ ಲೇಖನ : ಆತ್ಮೀಯರು, ಬಂಧುಗಳು, ಸಂಬಂಧಿಕರು, ಗೆಳೆಯರು,ಸಂಘ ಸಂಸ್ಥೆಗಳು ,ಸರ್ಕಾರಿ ಕಛೇರಿಗಳು ಸಂಪರ್ಕವನ್ನು ಇಟ್ಟುಕೊಳ್ಳಲು ಬಳಸುವ ಒಂದು ಮಾದ್ಯಮ ಪತ್ರ ಲೇಖನ. ಮಕ್ಕಳಲ್ಲಿ ಸ್ವಯಂ ಅಭಿವ್ಯಕ್ತಿ ಸಾಧನವೂ ಇದಾಗಿದೆ. ಮೊಬೈಲ್ ಯುಗದಲ್ಲಿ ಪತ್ರ ವ್ಯವಹಾರವು ಕಡಿಮೆಯಾದರೂ ನಿಂತಿಲ್ಲ . ಪತ್ರ ಲೇಖನದಲ್ಲಿ ಗಮನಿಸಬೇಕಾದ ಅಂಶಗಳು  : ·           ಪತ್ರವು ಸುಸ್ಪಷ್ಟ ಹಾಗೂ ಅಚ್ಚುಕಟ್ಟಾಗಿರಬೇಕು . ·           ಪತ್ರದ ಬಲಭಾಗದಲ್ಲಿ ಪತ್ರ ಬರೆಯುವವರ ಹೆಸರು, ಸ್ಥಳ, ದಿನಾಂಕ  ಇರಬೇಕು. ·           ಕಛೇರಿ ಪತ್ರದಲ್ಲಿ ಯಾರಿಗೆ ಪತ್ರ ಬರೆಯಲಾಗಿದೆಯೋ ಅವರ ವಿಳಾಸ ವನ್ನು ಪತ್ರದ ಎಡಭಾಗದಲ್ಲಿ ಬರೆಯಬೇಕು ·           ಪತ್ರದಲ್ಲಿ ಸಂಭೋಧನೆಯು ಬಹಳ ಮುಖ್ಯವಾಗಿದ್ದು ಇಡೀ ಪತ್ರದ ಮುಖ್ಯ ಅಂಶವಾಗಿದೆ. ತಂದೆಗೆ ತೀರ್ಥರೂಪರಿಗೆ ಎಂತಲೂ, ತಾಯಿಗೆ ಪತ್ರ ಬರೆಯುವಾಗ ಮಾತೃಶ್ರೀ ಯವರಿಗೆ ಎಂತಲೂ, ಗೆಳೆಯರಿಗೆ ಪತ್ರ ಬರೆಯುವಾಗ ಪ್ರೀತಿಯ ಗೆಳೆಯನಿಗೆ ಎಂತಲೂ , ಕಛೇರಿಗೆ ಬರೆಯುವಾಗ ಮಾನ್ಯರೇ ಎಂತಲೂ ಪ್ರಯೋಗಿಸಬೇಕು. ·             ಪತ್ರದಲ್ಲಿ   ವಿಷಯವು   ಮುಖ್ಯವಾಗಿದ್ದು  ,  ಪತ್ರವು   ಏನನ್ನು   ಹೇಳಬಯಸುತ್ತದೆ ಎಂಬುದನ್ನು ಸಂಕ್ಷಿಪ್ತವಾಗಿ ತಿಳಿಸಬೇಕು. ಈಗಾಗಲೇ ಪತ್ರ ವ್ಯವಹಾರ ನಡೆದಿದ್ದಲ್ಲಿ ಹಿಂದಿನ ಪತ್ರದ ಉಲ್ಲೇಖವನ್ನು ನಮೂದಿಸಬೇಕು. ·           ವಿಷಯ ವಿವರಣೆಯಲ್ಲಿ  ವಿಷಯವನ್ನು ಪೂರ್ಣವಾಗಿ ತಿಳಿಸಬೇಕು.

ಭಾಷಾ ಕೌಶಲಗಳು

ಭಾಷಾ ಕೌಶಲಗಳು ವ್ಯಕ್ತಿಯು ತನ್ನ ಅನುಭವ , ಅನಿಸಿಕೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳಲು ಇರುವ ಮಾಧ್ಯಮವೇ ಭಾಷೆ. ಭಾಷೆಯಲ್ಲಿ ನಾಲ್ಕು ರೀತಿಯ ಕೌಶಲಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ_ 1)       ಆಲಿಸುವಿಕೆ 2)      ಮಾತುಗಾರಿಕೆ 3)      ಓದುವಿಕೆ 4)     ಬರವಣಿಗೆ ಈ ಭಾಷಾ ಕೌಶಲಗಳ ಸೂಕ್ತ ಅಭ್ಯಾಸ ಇಲ್ಲವಾದಲ್ಲಿ ಭಾಷೆಯಲ್ಲಿ ಸಾಮಥ್ಯ ಗಳಿಸಲು ಸಾಧ್ಯವಿಲ್ಲ . ಸೂಕ್ತ ತರಬೇತಿ , ಅಭ್ಯಾಸ ಹಾಗೂ ನಿರಂತರ ಪ್ರಯೋಗದಿಂದ ಮಾತ್ರ ಭಾಷಾ ಕೌಶಲಗಳು ಬೆಳೆಯುತ್ತವೆ . ಆಲಿಸುವಿಕೆ : ಧ್ವನಿಗಳನ್ನು ಅರ್ಥಮಾಡಿಕೊಂಡು ಗ್ರಹಿಸುವುದೇ ಆಲಿಸುವಿಕೆಯಾಗಿದೆ . ಕೇಳುವಿಕೆಯೆಲ್ಲ ಗ್ರಹಿಕೆ ಅಲ್ಲ . ಕೇಳಿದ ಶಬ್ಧಗಳನ್ನು ಅರ್ಥಗಳನ್ನಾಗಿ ವ್ಯಾಖ್ಯಾನಿಸಿ ಸ್ವೀಕರಿಸುವ ಒಂದು ಮಾನಸಿಕ ಕ್ರೀಯೆ . ಇಲ್ಲಿ ಏಕಾಗ್ರತೆ ಮುಖ್ಯ . ಧ್ವನಿಯ ಏರಿಳಿತಗಳನ್ನು ಸ್ಪಷ್ಟವಾಗಿ ಗುರುತಿಸಬೇಕು . ಮುಂದಿನ ಎಲ್ಲಾ ಭಾಷಾ ಕೌಶಲಗಳಿಗೆ ಆಧಾರ ಆಲಿಸುವಿಕೆ . ಮಗುವು ಸಹ ತನ್ನ ತಾಯಿಯಿಂದ ಪದಗಲನ್ನು ಆಲಿಸಿ ಕಲಿಯುತ್ತದೆ . ಆಲಿಸುವಿಕೆಯನ್ನು ಉತ್ತಮಪಡಿಸಲು ಕೈಗೊಳ್ಳಬಹುದಾದ ಕ್ರಮಗಳು : 1). ದೈಹಿಕ ಆರೋಗ್ಯವನ್ನು ಉತ್ತಮಪಡಿಸುವುದು. 2) . ಪ್ರಶಾಂತ ವಾತಾವರಣ ಹಾಗೂ ಆತ್ಮೀಯತೆಯ ವಾತಾವರಣವನ್ನು ನಿರ್ಮಿಸುವುದು. 3) ಶಬ್ಧಾರ್ಥ ಮತ್ತು ಭಾವಾರ್ಥಗಳನ್ನು ಗಮನಿಸುವಂತೆ ಆಲಿಸಬೇಕು